ಚಿತ್ರ: ಅಮೃತಧಾರೆ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಮನೋಮೂರ್ತಿ
ಗಾಯನ: ರಾಜೇಶ್ ಕೃಷ್ಣನ್, ನಂದಿತ

ಗೆಳತಿ ಗೆಳತಿ

ಕ್ಷೇಮವೆ? ಸೌಖ್ಯವೆ?
ಬಾಳು ಪೂರ್ಣವಾಯಿತೆ?
ಜೀವ ಧನ್ಯವಾಯಿತೆ?

ಗೆಳೆಯ ಗೆಳೆಯ
ಬಾಳಿನ ಯಾತ್ರೆಯು.. ದೂರ ದಾರಿಗಂತಕೆ
ದಿವ್ಯವಾಗಿ ಸಾಗಲಿ

ಗೆಳೆಯ!

ಜೀವವನ್ನು ತೇಯುವೆ!
ಹೂವಿನಂತೆ ಹಾಸುವೆ!
ನೋಯದಂತೆ ಕಾಯುವೆ!

ನಾಳೆಯೆಂಬ ಮಿಥ್ಯಯೊ

ಕಳೆದುದೂ ಚರಿತ್ರೆಯೊ
ಪ್ರೀತಿಯೊಂದೆ ಸತ್ಯವೋ

ಗೆಳತಿ ಗೆಳತಿ
ಕ್ಷೇಮವೆೆ? ಸೌಖ್ಯವೆ?
ಬಾಳು ಪೂರ್ಣವಾಯಿತೆ?
ಜೀವ ಧನ್ಯವಾಯಿತೆ?

ಗೆಳೆಯ ಗೆಳೆಯ
ಬಾಳಿನ ಯಾತ್ರೆಯು.. ದೂರ ದಾರಿಗಂತಕೆ
ದಿವ್ಯವಾಗಿ ಸಾಗಲಿ
ಗೆಳೆಯಾ!

Category: ಕನ್ನಡ ಚಿತ್ರಸಾಹಿತ್ಯ
Category: ಅಮೃತಧಾರೆ ಚಿತ್ರ
Category: ನಾಗತಿಹಳ್ಳಿ ಚಂದ್ರಶೇಖರ್ ಸಾಹಿತ್ಯ

Category:Kannada